ದರ್ಗಾ ಮಾಳದ ಚಿತ್ರಗಳು

Author : ಲಕ್ಷ್ಮಣ ಕೆ.ಪಿ

₹ 275.00




Year of Publication: 2025
Published by: ಬೀಟಲ್‌ ಬುಕ್‌ ಶಾಪ್‌
Address: ಜೀರುಂಡೆ ಪುಸ್ತಕ ನಂ 26/ 5, 3ನೇ ಕ್ರಾಸ್‌, ಗಂಗೋದನಹಳ್ಳಿ ಮುಖ್ಯ ರಸ್ತೆ, ಇಂದಿರನಗರ, ಬೆಂಗಳೂರು
Phone: Jeerundebooks@gmail.com

Synopsys

‘ದರ್ಗಾ ಮಾಳದ ಚಿತ್ರಗಳು’ ಕೆ. ಪಿ. ಲಕ್ಷ್ಮಣ ಅವರ ದೇಶದ ಬಹುಮುಖ್ಯ ಅಂಬೇಡ್ಕರೈಟ್‌ ಚಿಂತಕರಾದ ಕೋಟಿಗಾನಹಳ್ಳಿ ರಾಮಯ್ಯ ಅವರ ಪ್ರಬಂಧ ಸಂಕಲನ ಕೃತಿಯಾಗಿದೆ. ನಾವು ಹೆಚ್ಚಿನ ಸಾರಿ ರಾಜಕಾರಣ, ಸರ್ವಾಧಿಕಾರ, ಇಕಾಲಜಿ, ಕಲೆ, ಜ್ಞಾನ, ಮಕ್ಕಳು, ಶಿಕ್ಷಣ, ಧರ್ಮ, ಪುರಾಣ ಇಂತ ಹಲವು ಸಂಕೀರ್ಣ ವಿಷಯಗಳನ್ನ 'ಮೇಲಿನವರ' ಮತ್ತು 'ದೂರದ' ಕಣ್ಣೋಟದಿಂದ ನೋಡಿ ಗ್ರಹಿಸಲು ಪ್ರಯತ್ನಿಸುತ್ತೇವೆ. ಇಲ್ಲಿನ ಬರಹಗಳಲ್ಲಿ ರಾಮಯ್ಯನವರು ಇದರ ವಿರುದ್ಧವಾದ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಎಲ್ಲವನ್ನು ತನ್ನ ಸುತ್ತಲು ನಡೆಯುವ ಘಟನೆ, ಮಾತುಕತೆ, ಜಗಳಗಳಿಂದ ಹಿಡಿದಿಡಿದಲು ಪ್ರಯತ್ನಿಸಿದ್ದಾರೆ. ಅದು ಶನಿದೇವರ ದೇವಸ್ಥಾನದ ಮೈಕ್‌ಸೆಟ್‌ನಲ್ಲಿ ಕೇಳುವ 'ಯುದ್ಧಕಾಂಡ'ದ ಹಾಡಿನಿಂದ ಹಿಡಿದು ಮಕ್ಕಳ ಕಣ್ಣಿಗೆ ಕಾಣದಾಗಿರುವ ಮಾವಿನ ಚಿಗುರಿನವರೆಗೂ; ಅದರ ಹಿಂದೆ ಇರಬಹುದಾದ ಅನೂಹ್ಯ ಕಾರಣಗಳನ್ನು ಬಗೆಯುತ್ತಾ ಹೋಗುತ್ತಾರೆ. ಹಿಡಿಮಣ್ಣನ್ನು ಸೂಕ್ಷ್ಮವಾಗಿ ಜಾಲಾಡಿ ನೋಡಿ, ಇಡೀ ನೆಲದ ಗುಣವನ್ನು ಅರಿಯುವ ವಿಜ್ಞಾನಿಯಂತೆ, ಆದರೆ ಅದು ವ್ಯಕ್ತವಾಗುವ ರೀತಿ ಘನ ಗಂಭೀರವಾಗಿಯಲ್ಲದೆ ತುಂಬಾ ಜಾಗಗಳಲ್ಲಿ ತಿಳಿಯಾಗಿಯೂ ಹಗೂರವಾಗಿಯೂ ವ್ಯಕ್ತವಾಗುತ್ತದೆ.

About the Author

ಲಕ್ಷ್ಮಣ ಕೆ.ಪಿ

ರಂಗಕರ್ಮಿ ಲಕ್ಷ್ಮಣ ಕೆ.ಪಿ ಮೂಲತಃ ನೆಲಮಂಗಲದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಶಿವಮೊಗ್ಗದ ಹೆಗ್ಗೋಡು ನಿನಾಸಂ ಥಿಯೇಟರ್ ನಲ್ಲಿ ರಂಗಭ್ಯಾಸ, ಸಿಂಗಾಪುರದ ಇಂಟರ್ ಕಲ್ಚರ್ ಥಿಯೇಟರ್ ನಲ್ಲಿಯೂ ರಂಗಭ್ಯಾಸವನ್ನು ಪಡೆದಿರುತ್ತಾರೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕವನ ಹಾಗೂ ಲೇಖನಗಳ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ...

READ MORE